ಅಮೆರಿಕನ್ನರಿಂದ ಪಾಠ ಕಲಿಯಲಿದು ಸಕಾಲ…

Posted by ಅರುಂಧತಿ | Posted in | Posted on 7:01 AM

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.

ಭಾರತದ ಹಿಂದಿನ ವೈಭವವನ್ನು ಹೇಳಿ- ಕೇಳಿ ಸಾಕಾಗಿಹೋಗಿದೆ. ಒಂದೋ ನಾವೀಗ ಬದುಕಬೇಕು, ಇಲ್ಲವೇ ಇಡಿಯ ರಾಷ್ಟ್ರವನ್ನು ನಿರ್ನಾಮಗೊಳ್ಳಲು ಬಿಟ್ಟು ಸಾಯಬೇಕು. ಹೋರಾಡಿ ಬದುಕುವುದಕ್ಕಿಂತ ನರಸತ್ತವರ ಹಾಗೆ ಸಾಯುವುದೇ ಸರಿ ಎಂದವರ ಬಗ್ಗೆ ಯಾರೇನೂ ಮಾಡಲಾಗದು. ಅಂಥವರು ತಮ್ಮೂರ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಹಾರಾಡುವ ಉಗ್ರರ ಗುಂಡುಗಳಿಗೆ ಹೆಣವಾಗುತ್ತಾರೆ. ಹೀಗೆ ಸತ್ತಿದ್ದಕ್ಕೆ ಸರ್ಕಾರದಿಂದ ಲಕ್ಷ ಲಕ್ಷ ರುಪಾಯಿಗಳ ಭಕ್ಷೀಸು ಪಡೆಯುತ್ತಾರೆ.
ಇಂತಹ ಸಾವಿಗೆ ನಮ್ಮ ಪಾಳಿ ಎಂದು ಬಂದೀತೋ ಎಂದು ಕಾಯುತ್ತ ಕೂರೋಣವೆ?

ನಮ್ಮಲ್ಲಿ ಜೀವಗಳಿಗೆ ಬೆಲೆಯೇ ಇಲ್ಲ. ಇಂದು ಬಾಂಬ್ ದಾಳಿಗೆ ತತ್ತರಿಸಿದ ಮುಂಬಯಿಯಲ್ಲಿ ನಾಳೆ ಎಲ್ಲವೂ ಸರಿಯಾಗಿಯೇ ನಡೆಯುತ್ತದೆ. ಬೆಳಗಿನ ಎಕ್ಸ್ ಪ್ರೆಸ್ ರೈಲು ಸರಿಯಾದ ಸಮಯಕ್ಕೆ ಬರುತ್ತದೆ. ಕಾಲಿಗೆ ಬಿಗಿಯಾಗಿ ಲೇಸ್ ಕಟ್ಟಿಸಿಕೊಂಡ ಮಗು ತನ್ನ ಶಾಲೆಗೆ ಹೊರಡುತ್ತದೆ. ತರಕಾರಿ ಮಾರಾಟ, ಹೆಂಗಸರ ಚೌಕಶಿ, ಷೇರು ಪೇಟೆ- ಎಲ್ಲವೂ ಮಾಮೂಲಿ. ಆದರೆ, ರಾಷ್ಟ್ರದ ಅಸ್ಮಿತೆಗೆ ಆದ ಗಾಯ…? ಅದು ಮಾಯುವುದು ಯಾವಾಗ?

೧೯೯೩ರಲ್ಲಿ ಆದ ಮುಂಬೈ ಸರಣಿ ಸ್ಫೋಟದ ರೂವಾರಿಗಳೇ ಇನ್ನೂ ಕೈಗೆ ಸಿಕ್ಕಿಲ್ಲ. ಸಂಸತ್ತಿನ ಮೇಲೆ ಆಕ್ರಮಣ ಮಾಡಿದವರಿಗೆ ಶಿಕ್ಷೆ ಘೋಷಣೆಯಾಗಿದ್ದರೂ ಜಾರಿಯಾಗಿಲ್ಲ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದವರೂ ಪತ್ತೆಯಾಗಿಲ್ಲ. ಕರಾಚಿಯಿಂದ ಉಗ್ರರು ಮುಂಬೈಗೆ ರಾಜಾರೋಷವಾಗಿ ಬಂದಿದ್ದಾರೆಂದರೆ, ಇಡಿಯ ರಕ್ಷಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆಯೆಂದು ಕೇಳುವವರಿಲ್ಲ.
ಪಟ್ಟಿ ಸಕಷ್ಟು ಉದ್ದವಿದೆ. ರಾಷ್ಟ್ರವೆಂಬ ನ್ಯಾಯಾಲಯದಲ್ಲಿ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿದ್ದೇವೆ. ನಿಷ್ಕ್ರಿಯತೆಯ ಕಳಂಕ ನಮ್ಮನ್ನು ಮೆತ್ತಿಕೊಂಡಿದೆ. ಇನ್ನು ಬಹುಕಾಲ ಇದು ನಡೆಯಲಾರದು. ನಮ್ಮ ದಾರಿ ನಾವು ಆರಿಸಿಕೊಳ್ಳಬೇಕಿದೆ. ಒಂದೋ ಹೇಡಿಗಳಂತೆ ಸಾಯಬೇಕು, ಇಲ್ಲವೇ ದೇಶದ್ರೋಹಿಗಳನ್ನು ಹುಡುಹುಡುಕಿ ಕೊಲ್ಲಬೇಕು. ಇದು ತುರ್ತು ಪರಿಸ್ಥಿತಿ. ಹೀನ ರಕ್ಷಣಾ ಮಂತ್ರಿ ಶಿವರಾಜ ಪಾಟೀಲರನ್ನು, ಚಮಚಾಗಿರಿಗಷ್ಟೇ ಸೂಕ್ತರಾದ ಮನಮೋಹನ ಸಿಂಗರನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲವಲ್ಲ.

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು.
ನಮ್ಮ ಪ್ರಧಾನಿಗೆ ಅಷ್ಟೊಂದು ತಾಕತ್ತಿಲ್ಲ ಬಿಡಿ. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.

ಆದರೇನು? ಅಂಥದೊಂದು ಇಚ್ಛಾಶಕ್ತಿ ಬೇಕಲ್ಲ? ಓಟಿಗಾಗಿ ಗಡ್ಡ ನೆಕ್ಕುವವರು ಬದುಕಿರುವವರೆಗೆ ಅದು ಸಾಧ್ಯವಾಗಲಾರದು. ಅವರನ್ನು ಪಕ್ಕಕ್ಕೆ ತಳ್ಳಿನಾವೇ ಮುಂದೆ ಬಂದರೆ…? ಅದು ಸರಿ. ಎದುರು ಬಂದ ಸೋಗಲಾಡಿ ಬುದ್ಧಿಜೀವಿಗಳನ್ನು, ಭಾರತೀಯತೆಯ ಬದ್ಧ ದ್ವೇಷಿಗಳನ್ನು ಹಳ್ಳದಲ್ಲಿ ಹೂತು, ರಾಷ್ಟ್ರ ರಕ್ಷಿಸುವ ಹೊಣೆ ನಮ್ಮದೇ.

ಈ ಬಾರಿ ಪ್ರತ್ಯುತ್ತರ ನೀಡಬೇಕಿರುವ ಹೊಣೆ ಇಂಟೆಲಿಜೆನ್ಸ್ ಅಧಿಕಾರಿಗಳದಲ್ಲ, ರಾಜಕಾರಣಿಗಳದೂ ಅಲ್ಲ. ಅದು ನಮ್ಮದು. ನಮ್ಮದೇ.
ಭಯೋತ್ಪಾದಕರ ಬೆಂಬಲಿಗರು ನಮ್ಮ ನಡುವೆಯೇ ಇದ್ದಾರೆ. ಅಂಥವರ ಮೇಲೆ ದಿಗ್ಬಂಧನ ನಾವು ಹೇರೋಣ. ಒಂದೊಂದು ಅನ್ನದ ಕಾಳಿಗೂ ಅವರು ಪರಿತಪಿಸುವಂತಾಗಬೇಕು. ಅಲ್ಲಿಂದ ಹೊರಟ ಬೇಗೆ, ಭಯೋತ್ಪಾದನೆಯನ್ನು ಸುಟ್ಟು ಬೂದಿ ಮಾಡಲಿ. ನಮ್ಮಲ್ಲಿರುವ ಅಸ್ತ್ರ ಇದೊಂದೇ.
ಬಳಸಿ. ಚೆನ್ನಾಗಿ ಬಳಸಿ. ಇದು ಕೊನೆಯ ಯುದ್ಧ. ಈ ಬಾರಿ ಗೆಲ್ಲೋಣ. ಇಲ್ಲವೇ ಸತ್ತು ಮಲಗೋಣ. ಆಯ್ಕೆ- ನಿಮ್ಮದು.

Comments Posted (1)

  1. ಹೌದು, ಈ ಸಮಯದಲ್ಲಿ ಅವರಿಂದ ಕಲಿಯಲೇಬೇಕು. ನಮ್ಮವರಿಗೆ, ಹುಡುಕಿ ಶಿಕ್ಷಿಸುವ ಮಾತಿರಲಿ, ನೇರ ನಮ್ಮ ಸಂಸತ್ ಭವನ ಮೇಲೆ ದಾಳಿ ಮಾಡಿದವರು, ಮುಂಬಯಿ ಮೇಲೆ ದಾಳಿ ಮಾಡಿದವರು, ನಮ್ಮ ಅಸಂಖ್ಯಾತ ಜನರನ್ನು ಬಲಿ ತೆಗೆದುಕೊಂಡವರು, ಅದಕ್ಕೆ ಪರೋಕ್ಷವಾಗಿ ಕಾರಣೀಕರ್ತರು ಕಣ್ನೇದುರಿಗೆ ಇದ್ದರೂ, ಶಿಕ್ಷಿಸುವ ಗಟ್ಟಿತನ ನಮ್ಮವರಿಗೆ ಇಲ್ಲ.ಅವರಿಗೆ ಕ್ಷಮಾದಾನ ನೀಡಬಹುದೇನೊ, ಶಿಕ್ಷಿಸುವ ಅಧಿಕಾರಗಳಿದ್ದಲ್ಲಿ ಅವರ ಮೇಲೆಯೆ ಆರೋಪ ಹಾಕಿ ಅವರಿಗೆ ದಂಡಿಸುವ ವ್ಯವಸ್ಥೆ ಇದೆ. ಆದರೂ ಅದಕ್ಕೆ ನಾವೇ ಉತ್ತರ ಕಂಡುಹಿಡಿಯಬೇಕಾಗಿದೆ.